Tuesday, March 29, 2011

ರಾಧಾ ಕೃಷ್ಣಾ .......

 
ಕೊಳಲೂದಿ ಸಖಿಯರನು ಕರೆದನಾ ಗೊಲ್ಲ
ರಾಧೇ ನಿನ್ನನು ಉಳಿದು ಬಂದಿರುವರೆಲ್ಲ !

ಯಮುನಾ ನದೀ ತೀರದಲಿ ಓಡಿ ಕರೆದ
ಹುಡುಕಾಡಿ ಬಸವಳಿದನು ವಿರಹದಿಂದ
ರಾಧೇ ಎನುವ ಕೂಗು ನೀ ಕೇಳಲಿಲ್ಲ
ಕೇಳಿದೆಯೋ, ಮರೆತಿಹೆಯೋ ನೀ ಬಾರಲಿಲ್ಲ !!
----
ಕೃಷ್ಣಾ ನೀ ಕರೆದಾಗ ನಾ ಬಾರದಿಹೆನೆ ?
ನೀ ಸಿಗದೇ ಆರುವುದೇ ವಿರಹದಾ ಬೇನೆ ?
ಹೂವನ್ನೇ ತುಂಬಿರುವ ಪ್ರೇಮದುದ್ಯಾನ ನೀನು
ಅಲ್ಲೆಲ್ಲೋ ಸೆರೆಸಿಕ್ಕ ಬಿಡಿಹೂವು ನಾನು

ಕೊನೆಯೆ೦ತೊ ಅರಿಯದಿಹ ಈ ಪ್ರೇಮ ಕತೆಗೆ
ನೋವ ಬೆನ್ನುಡಿ ಇಹುದೆ ಪ್ರೀತಿ ಉನ್ನತಿಗೆ ?

ಈಶ್ವರ ಕಿರಣ ಭಟ್
ಆಗಸ್ಟ್ ೨೦೧೦

1 comment:

Anu said...

ಕಿರಣನಿಗೆ ಈಗಲಾದರೂ ರಾಧೆ ನೆನಪಾದಳಲ್ಲ..
ಇನ್ನಾದರೂ ಬಚ್ಚಿಟ್ಟುಕೋ ನಿನ್ನವಳ ನೆನಪುಗಳನೆಲ್ಲ..
ಚೆನ್ನಾಗಿ ಮೂಡಿ ಬಂದಿದೇ ನಿನ್ನ ಕವನದ ಸಾಲುಗಳೆಲ್ಲ..
ನೀಡುವೆನು ನಿನಗೆ ನನ್ನ ಅಭಿನಂದನೆಗಳನ್ನೆಲ್ಲಾ..!!