Wednesday, September 21, 2011

ಏನೋ ಬೇಕಾಗಿದೆ !

ಏನೋ ಬೇರೆ ಬೇಕಾಗಿದೆ !
ಎಂಜಲು ಹಾರಿದ್ದಕ್ಕೆಲ್ಲ
ಧ್ಯಾನಿಸಿ ಅನುಭವಿಸಿದ
ಗಾಯನ ಎನ್ನದಿರಿ !

ಕಲ್ಲಿಗೆ ಕಲ್ಲು ತಿಕ್ಕಿದರೂ ಬೆಂಕಿ ಸಿದ್ದ !
ಆದರೂ
ದಾರಿ ಸವೆಸಲಾರದ
ಕತ್ತಲ ಸೆರೆ ಒಡೆಯಲಾಗದ
ಮಿಣುಕು ಹುಳುವಿನಂತೆ !!
ಮಿಂಚೆಂದೊದರದಿರಿ !
ದೀಪವೂ ಅಲ್ಲವದು.
ಸುಮ್ಮನೆ ಹಾರಿದ ಕಿಡಿಗೆ ಬದುಕು ಅಷ್ಟೆ !

ಎರೆಹುಳು ಹೋದರೆ ಎರೆ ಅನ್ನಿ ! ಸಾಕು
ಬೊಬ್ಬಿಟ್ಟು ಕೂಗದಿರಿ ಹೆಬ್ಬಾವು ಎಂದು !
ನಿಮಗೆ ಹಾಗನಿಸಿದರೆ ಅದು
ನಿಮ್ಮ ದೃಷ್ಟಿದೋಷ !!

೨೨-೦೯-೨೦೧೧

6 comments:

Badarinath Palavalli said...

ಭಟ್ಟರ ಪ್ರಯೋಗಗಳಿಗೆ ಭಟ್ಟರೇ ಸಾಟಿ. ಆಧುನಿಕ ಪದ ಕ್ರೀಡಾ ಪ್ರವೀಣ!

ಬದುಕಿನ ಅಮೂರ್ತತೆ ಮತ್ತು ಅಂತರ್ಗತ ಆತಂಕಗಳ ಭಾವಪೂರ್ಣ ನಿರೂಪಣೆ ಇಲ್ಲಿದೆ. ಬಳಕೆಯ ಭಾಷೆಯಲ್ಲೂ ನೇರವಂತಿಕೆ ಇದೆ. ನೀವು ಎರೆ ಹುಳು ಪ್ರತಿಮೆಯನ್ನು ಬಳಸುವುದರಲ್ಲೇ ನಿಮ್ಮ ಪ್ರೌಢಿಮೆ ಗೊಚರ.

ಗಿರೀಶ್.ಎಸ್ said...

Nice one re ......

Ragu Kattinakere said...

good one

KalavathiMadhusudan said...

gaardabhave gandarvagaanavendu jaikaara haakuvavarigondu sandesha.chennaagide.
abhinandanegalu.

ರವಿ ಮೂರ್ನಾಡು said...

ನಿಮ್ಮದೇ ಆದ ಶೈಲಿ ನನಗೆ ವಿಭಿನ್ನವಾಗಿ ಕಾಣಿಸಿತು. ಅದು ಕಾವ್ಯದಲ್ಲಿ ಬೇಕೆ ಬೇಕು. ಅದನ್ನು ನೀವು ಸಿದ್ಧಿಸಿದ್ದೀರಿ.ಭಾವಕ್ಕೆ ಪದ ಕಟ್ಟುವ ತಾಕತ್ತು ಇಷ್ಟವಾಯಿತು ಈಶ್ವರಣ್ಣ. ಅಭಿನಂದನೆಗಳು.

ಜಲನಯನ said...

ಸುಮ್ಮನೆ ಹಾರಿದ ಕಿಡಿಗೆ ಬದುಕು ಅಷ್ಟೆ...ಹೌದು ಕಿಡಿ ಬೆಂಕಿಯದೇ ಆಗಬೇಕೆಂದಿಲ್ಲ ಬದುಕು ಮೂಡಲು ಎನ್ನುವ ಭಾವ ಬಹಳ ಚನ್ನಾಗಿದೆ...ಈಶ್ವರ್ ಸರ್ ಧನ್ಯವಾದ ಜಲನಯನಕ್ಕೆ ಬಂದಿರಿ.