Thursday, July 5, 2012

ಇಂದ್ಯಾಕೆ ತೊರೆದೆ ಹೇಳು


ಇಂದ್ಯಾಕೆ ತೊರೆದೆ ಹೇಳು
ನೀನಿರದೆ ಇಹುದೆ ಬಾಳು
ಒಂದೆ ಭಾವ ಒಂದೆ ಜೀವ
ಇಂದು ಎರಡು ಹೋಳು!

ಬಿತ್ತಿದಾಸೆ ಚಿಗುರುಗನಸು
ಮತ್ತೆ ಬೆಳೆಯೆ ಪ್ರೇಮಜಲದಿ
ಸುತ್ತ ಬರುವ ಬೆಂಕಿ ವಿರಸ
ಹಿತವಾಯಿತೆ ಹೇಳು?

ಒಲವು ಪಾಶ ನಾನೆ ಕೊರಳು
ನೀನೆ ಎಳೆವ ನೋವಿನಬಲ
ಕರಗಿ ಹೋಗಲೆಲ್ಲ ನೋವು
ವಶವಾಗಲಿ ಸಾವು!

3 comments:

Badarinath Palavalli said...

ಹೇಳಿ ಹೋಗು ಕಾರಣ ನಲ್ಲೆ ಅನ್ನುವಂತಹ ತೀವ್ರ ನೋವಿನ ಕವನ.

ವಿಷಾದ ಭಾವ ಗೀತೆ.

Swarna said...

ಸಾವ್ಯಾಕೆ ತಮ್ಮ, ಪ್ರೀತಿ ವಶವಾಗಲಿ.
ಇತ್ತೀಚಿಗೆ ನಿಮ್ಮ ಕವಿತೆಗಳಲ್ಲಿ ಪ್ರೇಮ ತುಸು ಹೆಚ್ಚಾಗೆ ಇಣುಕುತ್ತಿದೆ.
:)ಚಂದ ಇದೆ.
ಒಂದು ಕೋರಿಕೆ: ಕೊನೆಯ ಸಾಲುಗಳನ ಸಾಧ್ಯವಾದರೆ, ಮನಸು ಬಂದರೆ ಆಶಾವಾದಕ್ಕೆ ಮಾರ್ಪಡಿಸಿ ಬಿಡಿ.
ಸ್ವರ್ಣಾ

anushree hegde said...

"ಕೈಗಳೇಕೋ ರೆಕ್ಕೆ ಆಗಲೇ ಇಲ್ಲ" istavaayitu...