Tuesday, October 23, 2012

ಬರಿಯ ನಾನು!


ನನ್ನ ಕಾಯುವ ಅವಳು ಕರಿಮುಗಿಲೊ ಸುಳಿಮಿಂಚೊ
ಸುಮ್ಮನುರಿಯುವ ಹಗಲೊ ತಿಳಿಯದಾದೆ
ಸೆಳೆತವೇನೋ ತಿಳಿಯೆ, ಮತ್ತೇನೂ ಹೇಳದೆಯ
ಇನ್ನೂ ಕಾಯುತಲಿರಲಿ; ತಿರುಗಿ ಬಂದೆ!

ಹೇಗೆ ಹೇಳುವುದಿನ್ನು ಒಲವೆಂದೊ ಚೆಲುವೆಂದೊ
ಸಾಗಹಾಕುವ ಸಮಯ ಸಾಕು ಎಂದೋ?
ನೋಡನೋಡುತ್ತಲೇ ಬೆಳೆದ ಮಲ್ಲಿಗೆ ಬಳ್ಳಿ
ಹೂ ಬಿಡದೆ ಸೊರಗೀತೆ? ತಪ್ಪು ನಿನ್ನದೆಂದು?

ಮಳೆಯ ಹನಿ ಬರಬೇಕು, ಒಡೆದು ಆ ಮುಗಿಲುಗಳು
ಕರಗಬೇಕು ಅಲ್ಲಿ ಹಾಲು ಜೇನು!
ಇಲ್ಲವಾದರೆ ಸುಟ್ಟು ಕರಕಲಾಗುತ ಹೀಗೆ
ಇರಬೇಕು ಇನ್ನು ನಾನು ನೀನು!

4 comments:

Badarinath Palavalli said...

ಒಲುಮೆಯಲ್ಲಿ ತಾಳ್ಮೆಯ ಪರೀಕ್ಷೆ ಹೆಚ್ಚು.

Harisha - ಹರೀಶ said...

ಚೆಂದದ ಸಾಲುಗಳು :)

Swarna said...


ಒಲವು, ಚೆಲುವು, ಮಿಂಚು, ಗುಡುಗು ಎಲ್ಲವೂ ಅವಳು.
ಮಳೆಯಾಗಿ ಸುರಿಯಬಲ್ಲಳು, ಹಗಲಾಗಿ ಉರಿಯಬಲ್ಲಳು.
ಹಾಲು ಜೇನು ಬೇಗ ಸೇರಲಿ
ಚೆನ್ನಾಗಿದೆ
ಸ್ವರ್ಣಾ

sunaath said...

ಸ್ವರ್ಣಾ ಅವರು ಹೇಳಿದರಲ್ಲ! ಅವರ ಆಶಯವೇ ನನ್ನದೂ!